೨೦೧೩ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಐ ಪಿ ಎಲ್ ೬ ಎಂದೂ ಕರೆಯಲಾಗುತ್ತದೆ. ೨೦೦೭ರಲ್ಲಿ ಆರಂಭವಾದ ಈ ಕ್ರೀಡಾಕೂಟದ ೬ನೇ ಆವೃತ್ತಿ ಇದು. ಈ ಅವೃತ್ತಿಯಲ್ಲಿ ೯ ತಂಡಗಳು ಭಾಗವಹಿಸಿದ್ದವು. ಇದು ಏಪ್ರಿಲ್ ೩ ರಿಂದ ಮೇ ೨೬ ರವರೆಗೆ ನಡೆಯಿತು. ಇದರ ಉದ್ಘಾಟನಾ ಸಮಾರಂಭ ಎಪ್ರಿಲ್ ೨ರಂದು ಕಲ್ಕತ್ತಾದ ಸಾಲ್ಟ್ ಲೇಕ್ ಕ್ರಿಡಾಂಗಣದಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ಪೆಪ್ಸಿ ಕಂಪನಿಯು ಐಪಿಎಲ್ ನ ಮುಖ್ಯ ಪೋಷಕರಾದರು. ಈ ಆವೃತ್ತಿಯು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ನಡೆಸಿದ ಕಳ್ಳಾಟ ಬಯಲಿಗೆ ಬಂದು ಕುಖ್ಯಾತಿ ಪಡೆಯಿತು. ಫ಼ಿನಲ್ ನಲ್ಲಿ ಮುಂಬಯಿ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ೨೩ ರನ್ ಗಳಿಂದ ಸೋಲಿಸಿ ಚಾಂಪಿಯನ್ನರಾದರು.